ಲಿಯಾಂಡರ್‌ ಏಡ್ರಿಯನ್‌ ಪೇಸ್‌ (ಜನನ: ೧೯೭೩ರ ಜೂನ್‌ ೧೭) ಭಾರತದ ಓರ್ವ ವೃತ್ತಿಪರ ಟೆನಿಸ್‌ ಆಟಗಾರನಾಗಿದ್ದು, ಈತ ಪ್ರಸಕ್ತವಾಗಿ ಪ್ರವಾಸ ಮತ್ತು ಡೇವಿಸ್‌ ಕಪ್‌ ಪಂದ್ಯಾವಳಿಯ ಡಬಲ್ಸ್‌‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ೭ ಡಬಲ್ಸ್‌‌ ಮತ್ತು ೬ ಮಿಶ್ರ ಡಬಲ್ಸ್‌‌ ಟೆನಿಸ್‌ ಗ್ರಾಂಡ್‌ ಸ್ಲಾಂ ಪಟ್ಟಗಳನ್ನು ಗೆದ್ದುಕೊಂಡಿರುವ ಹಾಗೂ ಇತರ ಹಲವಾರು ಗ್ರಾಂಡ್‌ ಸ್ಲಾಂ ಅಂತಿಮ ಪಂದ್ಯಗಳಲ್ಲಿ ಉಪಾಂತ-ವಿಜಯಿಯಾಗಿ (ರನ್ನರ್‌‌-ಅಪ್‌) ಹೊರಹೊಮ್ಮಿರುವ ಈತ, ಪ್ರಪಂಚದಲ್ಲಿನ ಡಬಲ್ಸ್‌‌ ಮತ್ತು ಮಿಶ್ರ ಡಬಲ್ಸ್‌‌ ವಲಯದ ಮಹೋನ್ನತ ಮತ್ತು ಅತ್ಯಂತ ಗೌರವಾನ್ವಿತರಾದ ಸಮಕಾಲೀನ ಆಟಗಾರರ ಪೈಕಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ೨೦೧೦ರಲ್ಲಿ ವಿಂಬಲ್ಡನ್‌ ಚಾಂಪಿಯನ್‌ಗಿರಿಗಳಲ್ಲಿ ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ಮಿಶ್ರ ಡಬಲ್ಸ್‌‌ ಪಟ್ಟವನ್ನು ಗೆದ್ದ ನಂತರ, ಮೂರು ವಿಭಿನ್ನ ದಶಕಗಳಲ್ಲಿ ಯಾವುದೇ ವಿಂಬಲ್ಡನ್‌ ಪಟ್ಟವನ್ನು ಗೆಲ್ಲುವಲ್ಲಿ ರಾಡ್‌ ಲೇವರ್‌ ನಂತರದ ಮೊದಲ ಪುರುಷ ಟೆನಿಸ್‌ ಆಟಗಾರ ಎಂಬ ಕೀರ್ತಿಗೆ ಪಾತ್ರನಾದ. ಈತ ಭಾರತದ ಅತ್ಯಂತ ಯಶಸ್ವೀ ವೃತ್ತಿಪರ ಟೆನಿಸ್‌ ಆಟಗಾರರ ಪೈಕಿ ಒಬ್ಬನಾಗಿದ್ದಾನೆ ಮತ್ತು ಭಾರತೀಯ ಡೇವಿಸ್‌ ಕಪ್‌ ತಂಡದ ಹಿಂದಿನ ನಾಯಕನೂ ಆಗಿದ್ದಾನೆ. ಹಲವಾರು ಪ್ರಶಸ್ತಿಗಳನ್ನು ಈತ ಸ್ವೀಕರಿಸಿದ್ದಾನೆ. ಕ್ರೀಡೆಗೆ ಸಂಬಂಧಿಸಿದ ಭಾರತದ ಅತ್ಯುನ್ನತ ಗೌರವವಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ೧೯೯೬–೧೯೯೭ರಲ್ಲಿ, ಅರ್ಜುನ ಪ್ರಶಸ್ತಿಯನ್ನು ೧೯೯೦ರಲ್ಲಿ ಸ್ವೀಕರಿಸಿರುವುದು ಇವುಗಳಲ್ಲಿ ಸೇರಿವೆ. ಇವಷ್ಟೇ ಅಲ್ಲದೇ, ಭಾರತದಲ್ಲಿ ಟೆನಿಸ್‌ ಕ್ರೀಡೆಗೆ ಈತನು ನೀಡಿರುವ ಮಹೋನ್ನತವಾದ ಕೊಡುಗೆಯನ್ನು ಪರಿಗಣಿಸಿ ಈತನಿಗೆ ೨೦೦೧ರಲ್ಲಿ ಪದ್ಮಶ್ರೀ ಹಾಗೂ ೨೦೧೪ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಡಬಲ್ಸ್‌‌ ಮತ್ತು ಮಿಶ್ರ ಡಬಲ್ಸ್‌‌ ಸ್ಪರ್ಧೆಗಳಲ್ಲಿ ಈತ ಸಾಧಿಸಿರುವ ಹನ್ನೆರಡು ಗ್ರಾಂಡ್‌ ಸ್ಲಾಂ ವಿಜಯಗಳನ್ನು ಹೊರತುಪಡಿಸಿ, ಡೇವಿಸ್‌ ಕಪ್‌ ಪಂದ್ಯಾವಳಿಗಳಲ್ಲಿ ಭಾರತದ ಪರವಾಗಿ ಆಡುವಾಗ ಈತ ನೀಡಿದ ಹಲವಾರು ಸ್ಮರಣಾರ್ಹ ಪ್ರದರ್ಶನಗಳಿಗಾಗಿ ಪ್ರಸಿದ್ಧನಾಗಿದ್ದಾನೆ; ಅಷ್ಟೇ ಅಲ್ಲ, ೧೯೯೬ರ ಅಟ್ಲಾಂಟಾ ಒಲಿಂಪಿಕ್‌ ಆಟಗಳಲ್ಲಿ ಭಾರತದ ಪರವಾಗಿ ಆಟವಾಡಿ ಒಂದು ಕಂಚಿನ ಪದಕವನ್ನು ಗೆದ್ದಿರುವುದೂ ಇವನ ದಾಖಲೆಯಲ್ಲಿ ಸೇರಿದೆ. ೧೯೯೯ರ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್‌‌/ಮಿಶ್ರ ಡಬಲ್ಸ್‌‌ ವರ್ಗದಲ್ಲಿ ಈತ ಅಪರೂಪದ ಡಬಲ್‌ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾನೆ. ೧೯೯೨ರಿಂದ ೨೦೦೮ರವರೆಗೆ ಈತ ಅನುಕ್ರಮಿಕವಾಗಿ ಒಲಿಂಪಿಕ್‌ ಪಂದ್ಯಗಳಲ್ಲಿ ಪಾಲ್ಗೊಂಡಿದ್ದು, ತನ್ಮೂಲಕ ಐದು ಒಲಿಂಪಿಕ್‌ ಆಟಗಳಲ್ಲಿ ಸ್ಪರ್ಧಿಸಿದ ಕೀರ್ತಿಗೆ ಪಾತ್ರರಾಗಿರುವ ಬಂದೂಕುಗಾರರಾದ ಕಾರ್ನಿ ಸಿಂಗ್‌‌ ಮತ್ತು ರಣಧೀರ್‌‌ ಸಿಂಗ್‌‌ ನಂತರದ ಮೂರನೇ ಭಾರತೀಯ ಎನಿಸಿಕೊಂಡಿದ್ದಾನೆ. ೨೦೧೦ರ ವಿಂಬಲ್ಡನ್‌ನಲ್ಲಿ ಮಿಶ್ರ ಡಬಲ್ಸ್‌‌ ಪಟ್ಟವನ್ನು ಗೆದ್ದ ನಂತರ, ಮೂರು ವಿಭಿನ್ನ ದಶಕಗಳಲ್ಲಿ ವಿಂಬಲ್ಡನ್‌ ಪಟ್ಟಗಳನ್ನು ಗೆಲ್ಲುವಲ್ಲಿನ ಏಕೈಕ ಎರಡನೇ ಪುರುಷ (ರಾಡ್‌ ಲೇವರ್‌ ನಂತರ) ಎಂಬ ಕೀರ್ತಿಗೆ ಲಿಯಾಂಡರ್‌ ಪೇಸ್‌ ಪಾತ್ರನಾದ. ೨೦೧೦ರಲ್ಲಿ, ಒಲಿಂಪಿಕ್‌ ಗೋಲ್ಡ್‌ ಫೆಸ್ಟ್‌ ಎಂಬ ಪ್ರತಿಷ್ಠಾನದ ನಿರ್ದೇಶಕರ ಮಂಡಳಿಯನ್ನು ಅವನು ಸೇರಿಕೊಂಡ. ಈ ಪ್ರತಿಷ್ಠಾನವು ಗೀತ್‌ ಸೇಥಿ ಮತ್ತು ಪ್ರಕಾಶ್‌ ಪಡುಕೋಣೆಯವರ ಸಹ-ಸಂಸ್ಥಾಪನೆಯಲ್ಲಿ ರೂಪುಗೊಂಡಿದ್ದು, ಒಲಿಂಪಿಕ್‌ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಭಾರತದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಉದ್ದೇಶವನ್ನು ಅದು ಹೊಂದಿದೆ. == ಆರಂಭಿಕ ಜೀವನ == ಭಾರತದ ಕೋಲ್ಕತಾದಲ್ಲಿ ಲಿಯಾಂಡರ್‌ ಜನಿಸಿದ. ಹಿಂದೆ ಇದು ಕಲ್ಕತ್ತಾ ಎಂದು ಕರೆಯಲ್ಪಡುತ್ತಿತ್ತು. ವೆಸಿ ಪೇಸ್‌ ಮತ್ತು ಜೆನ್ನಿಫರ್‌‌ ಪೇಸ್‌ ಅವನ ಜನ್ಮದಾತರಾಗಿದ್ದು, ಭಾರತದ ಕೋಲ್ಕತಾದಲ್ಲಿ ಅವನು ಬೆಳೆದು ದೊಡ್ಡವನಾದ. ಕಲ್ಕತ್ತಾದ ಲಾ ಮಾರ್ಟಿನಿಯೇರ್‌, ಚೆನ್ನೈನ ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದ ಸೇಂಟ್‌ ಕ್ಸೇವಿಯರ್‌ ಕಾಲೇಜ್‌‌‌ನಲ್ಲಿ ಅವನು ಶಿಕ್ಷಣ ಪಡೆದ. ಅವನ ಹೆತ್ತವರಿಬ್ಬರೂ ಕ್ರೀಡಾಪಟುಗಳಾಗಿದ್ದರು. ೧೯೭೨ರ ಮ್ಯೂನಿಕ್‌ ಒಲಿಂಪಿಕ್ಸ್‌‌‌ನಲ್ಲಿ ಕಂಚಿನ ಪದಕವನ್ನು ಗೆದ್ದ ಭಾರತೀಯ ಹಾಕಿ ತಂಡದಲ್ಲಿ ಅವನ ತಂದೆ ವೆಸಿ ಪೇಸ್‌ ಮಧ್ಯ ಮೈದಾನದಲ್ಲಿನ ಓರ್ವ ಆಟಗಾರನಾಗಿದ್ದ. ೧೯೮೦ರ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಅವನ ತಾಯಿಯು ಭಾರತೀಯ ಬ್ಯಾಸ್ಕೆಟ್‌ಬಾಲ್‌ ತಂಡದ ನಾಯಕಿಯಾಗಿದ್ದಳು. ೧೯೮೫ರಲ್ಲಿ ಮದ್ರಾಸ್‌ನಲ್ಲಿರುವ ಬ್ರಿಟಾನಿಯಾ ಅಮೃತ್‌‌ರಾಜ್‌ ಟೆನಿಸ್‌ ಅಕಾಡೆಮಿಯೊಂದಿಗೆ ಪೇಸ್‌ ದಾಖಲು ಮಾಡಿಕೊಂಡ; ಅಲ್ಲಿ ಆತನಿಗೆ ಡೇವ್‌ ಒ'ಮೆಯೆರಾನಿಂದ ತರಬೇತಿ ದೊರೆಯಿತು. ಅವನ ಆರಂಭಿಕ ಬೆಳವಣಿಗೆಯಲ್ಲಿ ಈ ಅಕಾಡೆಮಿಯು ಒಂದು ಪ್ರಮುಖ ಪಾತ್ರವನ್ನು ವಹಿಸಿತು. ಲಿಯಾಂಡರ್‌ ೧೯೯೦ರ ವಿಂಬಲ್ಡನ್‌ ಜೂನಿಯರ್‌‌ ಪಟ್ಟವನ್ನು ಗೆದ್ದುಕೊಂಡಾಗ ಮತ್ತು ಜೂನಿಯರ್‌‌ ವರ್ಗದ ವಿಶ್ವ-ಶ್ರೇಯಾಂಕಗಳಲ್ಲಿ ಮೊದಲನೇ ಸ್ಥಾನಕ್ಕೆ ಏರಿದಾಗ ಅವನಿಗೆ ಅಂತರರಾಷ್ಟ್ರೀಯ ಪ್ರಸಿದ್ಧಿಯು ದಕ್ಕಿತು ಎನ್ನಬಹುದು. ಮೈಕೇಲ್‌ ಮಧುಸೂದನ್‌ ದತ್‌ ಎಂಬ ಬಂಗಾಳಿ ಕವಿಗೆ ಪೇಸ್‌ ಮರಿಮಗನಾಗಿದ್ದಾನೆ. ಪೇಸ್‌ ಹಿಂದೊಮ್ಮೆ ಬಾಲಿವುಡ್‌ ನಟಿ ಮಹಿಮಾ ಚೌಧರಿಯೊಂದಿಗೆ ಪ್ರಣಯ-ವಿಹಾರ ನಡೆಸಿದ್ದನಾದರೂ, ಈಗ ಆತ ರಿಯಾ ಪಿಳ್ಳೈ (ಬಾಲಿವುಡ್‌ ನಟ ಸಂಜಯ್‌ ದತ್‌‌‌ನ ಮಾಜಿ-ಪತ್ನಿ) ಎಂಬಾಕೆಯನ್ನು ಮದುವೆಯಾಗಿದ್ದಾನೆ ಹಾಗೂ ಈ ದಂಪತಿಗಳಿಗೆ ಆಯನಾ ಪೇಸ್ ಎಂಬ ಓರ್ವ ಮಗಳಿದ್ದಾಳೆ. == ವೃತ್ತಿಜೀವನ == === ಆರಂಭಿಕ ವೃತ್ತಿಜೀವನ (೧೯೯೧–೧೯೯೭) === ಜೂನಿಯರ್‌‌ ಓಪನ್‌ ಮತ್ತು ಜೂನಿಯರ್‌‌ ವಿಂಬಲ್ಡನ್‌ ವರ್ಗಗಳಲ್ಲಿನ ಪಟ್ಟಗಳನ್ನು ಗೆಲ್ಲುವ ಮೂಲಕ, ಪೇಸ್‌ ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಮುಂಚಿತವಾಗಿಯೇ ಭರವಸೆಯನ್ನು ತೋರಿಸಿದ. ೧೯೯೧ರಲ್ಲಿ ಆತ ವೃತ್ತಿಪರ ಆಟಗಾರನಾಗಿ ಹೊರಹೊಮ್ಮಿದ. ಜೂನಿಯರ್‌‌ ಶ್ರೇಯಾಂಕಗಳಲ್ಲಿ ಆತ ವಿಶ್ವದಲ್ಲೇ ಅಗ್ರಗಣ್ಯ ಪಟ್ಟಕ್ಕೆ ಏರಿದ. ೧೯೯೨ರಲ್ಲಿ, ಆತ ರಮೇಶ್‌ ಕೃಷ್ಣನ್‌ ಜೊತೆಗೂಡಿ ೧೯೯೨ರ ಬಾರ್ಸಿಲೋನಾ ಒಲಿಂಪಿಕ್ಸ್‌‌‌ನಲ್ಲಿ ಡಬಲ್ಸ್‌‌ ಸ್ಪರ್ಧೆಯ ಕ್ವಾರ್ಟರ್‌ ಫೈನಲ್‌ ಹಂತವನ್ನು ತಲುಪಿದ. ೧೯೯೬ರ ಅಟ್ಲಾಂಟಾ ಒಲಿಂಪಿಕ್ಸ್‌‌ನಲ್ಲಿ ಆತ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡ. ಅಲ್ಲಿ ಆತ ಫರ್ನ್ಯಾಂಡೊ ಮೆಲಿಗೆನಿಯನ್ನು ಬಗ್ಗುಬಡಿಯುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡ. ಅವನ ಈ ಸಾಧನೆಯಿಂದಾಗಿ, ನಾಲ್ಕು ದಶಕಗಳಿಗೂ ಹಿಂದೆ, ೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್‌‌‌ನಲ್ಲಿ ಜಾಧವ್‌ ಎಂಬಾತ ಕಂಚಿನ ಪದಕವನ್ನು ಗೆದ್ದುಕೊಂಡ ನಂತರದಲ್ಲಿ ಒಂದು ವೈಯಕ್ತಿಕ ಪದಕವನ್ನು ಗೆಲ್ಲುವಲ್ಲಿನ ಮೊದಲ ಭಾರತೀಯ ಎಂಬ ಕೀರ್ತಿಗೆ ಪೇಸ್‌ ಪಾತ್ರನಾದ. ಈ ಸಾಧನೆಯು ಟೆನಿಸ್‌ ಅಂಕಣದ ಮೇಲಿನ ತನ್ನ ಮಹೋನ್ನತ ಪ್ರದರ್ಶನಗಳ ಪೈಕಿ ಒಂದು ಎಂಬುದಾಗಿ ಪೇಸ್‌ ಉಲ್ಲೇಖಿಸಿದ; ಸದರಿ ಪಂದ್ಯದ ಸಮಯದಲ್ಲಿ ಅವನ ಮಣಿಕಟ್ಟು ತೀವ್ರವಾಗಿ ಗಾಯಗೊಂಡಿದ್ದು ಈ ಉಲ್ಲೇಖದ ಹಿಂದಿನ ಭಾಗಶಃ ಕಾರಣವಾಗಿತ್ತು. ಕ್ರೀಡೆಗೆ ಸಂಬಂಧಿಸಿದ ಅತ್ಯುನ್ನತ ಗೌರವವಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ಭಾರತ ಸರ್ಕಾರವು ಅವನಿಗೆ ೧೯೯೬ರಲ್ಲಿ ನೀಡಿ ಗೌರವಿಸಿತು. ಸರಣಿಯಲ್ಲಿನ ಅವನ ಮೊದಲ ಯಶಸ್ವೀ ವರ್ಷವು ೧೯೯೩ರಲ್ಲಿ ದಾಖಲಾಯಿತು. ಈ ಅವಧಿಯಲ್ಲಿ ಆತ ಸೆಬಾಸ್ಟಿಯನ್‌ ಲ್ಯಾರಿಯು ಎಂಬಾತನನ್ನು ಜೊತೆಯಾಟಗಾರನನ್ನಾಗಿಸಿಕೊಂಡು ಓಪನ್‌ ಡಬಲ್ಸ್‌‌ ಪಂದ್ಯದ ಉಪಾಂತ್ಯ ಹಂತವನ್ನು ತಲುಪಿದ. ೧೯೯೪ರಲ್ಲಿ ಮಧ್ಯಸ್ಥವಾದ ಒಂದು ಕ್ರೀಡಾಋತುವಿಗೆ ಸಾಕ್ಷಿಯಾದ ನಂತರ, ಕೆವಿನ್‌ ಉಲಿಯೆಟ್‌ ಜೊತೆಗೂಡಿ ಆತ ೧೯೯೫ರ ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ ಹಂತವನ್ನು ತಲುಪಿದ. ೧೯೯೬ರಿಂದ ಆತ ಸಹವರ್ತಿ ಭಾರತೀಯ ಆಟಗಾರನಾದ ಮಹೇಶ್ ಭೂಪತಿಯೊಂದಿಗೆ ಜೊತೆಯಾಟವನ್ನು ಆರಂಭಿಸಿದ; ಇದೊಂದು ವಿಜಯಶಾಲಿ ಸಂಯೋಜನೆ ಎಂಬುದಾಗಿ ನಂತರದಲ್ಲಿ ಸಾಬೀತಾಯಿತು. ಈ ವರ್ಷವು ಅತ್ಯಂತ ಯಶಸ್ವೀ ವರ್ಷವಾಗೇನೂ ಹೊರಹೊಮ್ಮಲಿಲ್ಲ; ವಿಶೇಷವಾಗಿ ಹೇಳುವುದಾದರೆ, ವಿಂಬಲ್ಡನ್‌ನಲ್ಲಿನ ೩೨ ಸಮಾಪ್ತಿಯ ಒಂದು ಸುತ್ತಿನೊಂದಿಗಿನ ಗ್ರಾಂಡ್‌ ಸ್ಲಾಂಗಳು ಅತ್ಯುತ್ತಮವಾಗಿದ್ದವು. ೧೯೯೭ರ ವರ್ಷವು ಪೇಸ್‌ ಮತ್ತು ಭೂಪತಿ ತಂಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಉತ್ತಮವಾದ ವರ್ಷ ಎಂದು ಸಾಬೀತಾಯಿತು. ಈ ವರ್ಷದಲ್ಲಿ ಓಪನ್‌ನ ಉಪಾಂತ್ಯ ಪಂದ್ಯಗಳಲ್ಲಿ ಹೊರಹೊಮ್ಮಿದ ಅವರ ಸಾಧನೆಯು, ಅವರ ಅತ್ಯುತ್ತಮ ಗ್ರಾಂಡ್‌ ಸ್ಲಾಂ ಫಲಿತಾಂಶ ಎಂಬ ಕೀರ್ತಿಗೆ ಪಾತ್ರವಾಯಿತು. ವರ್ಷದ ಆರಂಭದಲ್ಲಿ ೮೯ರಷ್ಟಿದ್ದ ಪೇಸ್‌ನ ಡಬಲ್ಸ್‌‌ ಶ್ರೇಯಾಂಕವು ವರ್ಷಾಂತ್ಯದ ವೇಳೆಗೆ ೧೪ರ ಮಟ್ಟಕ್ಕೆ ಏರಿತ್ತು. === ಡಬಲ್ಸ್‌‌ನಲ್ಲಿನ ಏಳಿಗೆ (೧೯೯೮–೨೦೦೨) === ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌ ಮತ್ತು ಓಪನ್‌ ಪಂದ್ಯಾವಳಿಗಳಂಥ ೩ ಗ್ರಾಂಡ್‌ ಸ್ಲಾಂಗಳ ಉಪಾಂತ್ಯ ಹಂತಗಳನ್ನು ತಲುಪುವ ಮೂಲಕ, ಲಿಯಾಂಡರ್‌ ಪೇಸ್‌ ಮತ್ತು ಮಹೇಶ್ ಭೂಪತಿ ಜೋಡಿಯ ಡಬಲ್ಸ್‌‌ ತಂಡವು ೧೯೯೮ರಲ್ಲಿ ಪ್ರಬಲವಾಗಿ ಬೆಳೆಯಿತು. ಅದೇ ವರ್ಷದಲ್ಲಿ, ಪ್ರವಾಸದಲ್ಲಿನ ತನ್ನ ಎರಡು ಅತಿದೊಡ್ಡ ಸಿಂಗಲ್ಸ್‌ ಫಲಿತಾಂಶಗಳನ್ನು ಪೇಸ್‌ ನೀಡಿದ್ದ. ನ್ಯೂಪೋರ್ಟ್‌ನಲ್ಲಿ ಒಂದು ಸಿಂಗಲ್ಸ್‌ ಪಟ್ಟವನ್ನು ಗೆಲ್ಲುವ ಮೂಲಕ ಮೊದಲ ಫಲಿತಾಂಶವು ಬಂದರೆ, ನ್ಯೂ ಹೇವನ್‌ ಪಂದ್ಯಾವಳಿಯಲ್ಲಿ ಪೀಟ್‌ ಸ್ಯಾಂಪ್ರಾಸ್‌‌ನನ್ನು ೬-೩, ೬-೪ ಅಂಕಗಳಿಕೆಯ ಮೂಲಕ ಅವನು ಬಗ್ಗುಬಡಿದು ದಾಖಲಿಸಿದ ಫಲಿತಾಂಶವು ಎರಡನೆಯದಾಗಿತ್ತು. ೧೯೯೯ರ ವರ್ಷದಲ್ಲಿ, ಈ ಜೋಡಿಯು ವಿಂಬಲ್ಡನ್‌ ಮತ್ತು ಫ್ರೆಂಚ್‌ ಓಪನ್‌‌ನ್ನು ಗೆಲ್ಲುವ ಮೂಲಕ ಎಲ್ಲಾ ೪ ಗ್ರಾಂಡ್‌ ಸ್ಲಾಂಗಳ ಅಂತಿಮ ಪಂದ್ಯಗಳನ್ನು ತಲುಪಿತು; ಈ ಮೂಲಕ ಗ್ರಾಂಡ್‌ ಸ್ಲಾಂ ಸ್ಪರ್ಧೆಯೊಂದರಲ್ಲಿ ಡಬಲ್ಸ್‌‌ ಸ್ಪರ್ಧೆಯೊಂದನ್ನು ಗೆಲ್ಲುವಲ್ಲಿನ ಮೊದಲ ಭಾರತೀಯ ಜೋಡಿ ಎಂಬ ಕೀರ್ತಿ ಇವರಿಗೆ ದಕ್ಕಿತು. ಲೀಸಾ ರೇಮಂಡ್‌ ಜೊತೆಗೂಡಿಯೂ ಆಟವನ್ನಾಡಿದ ಪೇಸ್‌, ವಿಂಬಲ್ಡನ್‌ನಲ್ಲಿ ಮಿಶ್ರ ಡಬಲ್ಸ್‌‌ ಸ್ಪರ್ಧೆಯಲ್ಲಿ ಗೆಲುವನ್ನು ದಾಖಲಿಸಿದ. ಡಬಲ್ಸ್ ವರ್ಗದಲ್ಲಿ ಮೊದಲನೇ ಶ್ರೇಯಾಂಕಕ್ಕೆ ಅವನ ಏರಿಕೆಯಾಗುವುದಕ್ಕೂ ಈ ವರ್ಷವು ಅಂಕಿತವನ್ನು ಹಾಕಿತು. ಇದನ್ನು ಅನುಸರಿಸಿಕೊಂಡು ಬಂದ ವರ್ಷದಲ್ಲಿ, ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಗೆ ಸಂಬಂಧಿಸಿದಂತೆ ಸೆಬಾಸ್ಟಿಯನ್‌ ಲ್ಯಾರಿಯು ಜೊತೆಗೂಡಿ ಹಾಗೂ ಫ್ರೆಂಚ್‌ ಓಪನ್‌ ಪಂದ್ಯಾವಳಿಗೆ ಸಂಬಂಧಿಸಿದಂತೆ ಜಾನ್‌ ಸೀಮರಿಂಕ್‌ ಜೊತೆಗೂಡಿ ಪೇಸ್‌ ಆಟವಾಡಿದ; ಆದರೆ ಎರಡೂ ಸಂದರ್ಭಗಳಲ್ಲಿ ಮೊದಲ ಸುತ್ತಿನಲ್ಲಿಯೇ ಈ ಜೋಡಿಯು ಸೋಲಬೇಕಾಗಿ ಬಂತು. ಓಪನ್‌ ಪಂದ್ಯಾವಳಿಗಾಗಿ ಪೇಸ್‌ ಮತ್ತೊಮ್ಮೆ ಮಹೇಶ್ ಭೂಪತಿಯೊಂದಿಗೆ ಕೈಜೋಡಿಸಿದನಾದರೂ, ಮತ್ತೊಮ್ಮೆ ಮೊದಲ ಸುತ್ತಿನಲ್ಲಿಯೇ ಸೋಲುಣ್ಣಬೇಕಾಯಿತು. ಸಿಡ್ನಿ ಒಲಿಂಪಿಕ್ಸ್‌‌‌ನಲ್ಲಿ ಈ ಜೋಡಿಯ ಮೇಲೆ ಅತಿ ಹೆಚ್ಚಿನ ಭರವಸೆಗಳನ್ನು ಇರಿಸಲಾಗಿತ್ತಾದರೂ, ಟಾಡ್‌ ವುಡ್‌ಬ್ರಿಜ್‌ ಮತ್ತು ಮಾರ್ಕ್‌ ವುಡ್‌ಫೋರ್ಡ್‌ ಎಂಬಿಬ್ಬರ ಆಸ್ಟ್ರೇಲಿಯನ್‌ ಜೋಡಿಯೊಂದಿಗೆ ಸೆಣಸುವಾಗ, ನಿರಾಶಾದಾಯಕವೆನ್ನುವ ರೀತಿಯಲ್ಲಿ ಪೇಸ್‌-ಭೂಪತಿ ಜೋಡಿಯು ಎರಡನೇ ಸುತ್ತಿನಲ್ಲೇ ನಿರ್ಗಮಿಸಿತು. ಸಿಡ್ನಿ ಒಲಿಂಪಿಕ್ಸ್‌‌ನ ಪ್ರಾರಂಭೋತ್ಸವದಲ್ಲಿ ಭಾರತದ ಧ್ವಜವನ್ನು ಹಿಡಿದು ಸಾಗುವ ಗೌರವಕ್ಕೆ ಪೇಸ್‌ ಪಾತ್ರನಾಗಿದ್ದ. ೨೦೦೧ರಲ್ಲಿ ಫ್ರೆಂಚ್‌ ಓಪನ್‌ ಪಂದ್ಯವನ್ನು ಗೆದ್ದ ಹೊರತಾಗಿಯೂ, ಭೂಪತಿ ಮತ್ತು ಪೇಸ್‌ ಜೋಡಿಯು ಇತರ ೩ ಗ್ರಾಂಡ್‌ ಸ್ಲಾಂಗಳಲ್ಲಿ ಮೊದಲನೇ ಸುತ್ತಿನಲ್ಲೇ ನಿರ್ಗಮಿಸಿತು. ೨೦೦೧ರಲ್ಲಿ ಭಾರತ ಸರ್ಕಾರವು ಪೇಸ್‌ಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿತು. ಬೂಸಾನ್‌ನಲ್ಲಿ ನಡೆದ ೨೦೦೨ರ ಏಷ್ಯನ್‌ ಕ್ರೀಡೆಗಳಲ್ಲಿ ಪೇಸ್‌ ಮತ್ತು ಭೂಪತಿ ಜೋಡಿಯು ಬಂಗಾರದ ಪದಕವನ್ನು ಗೆದ್ದುಕೊಂಡಿತು. ೨೦೦೨ರಲ್ಲಿ ಮೈಕೇಲ್‌ ಹಿಲ್‌ ಜೊತೆಗೂಡಿ ಹಲವಾರು ಪಂದ್ಯಾವಳಿಗಳಲ್ಲಿ ಆಡಿದ ಲಿಯಾಂಡರ್‌, ಮಧ್ಯಸ್ಥವಾದ ಯಶಸ್ಸನ್ನು ದಾಖಲಿಸಿದ. === ೨೦೦೩ರಿಂದ–ಇಲ್ಲಿಯವರೆಗೆ === ೨೦೦೩ರಿಂದ ಮೊದಲ್ಗೊಂಡು ವರ್ತಮಾನದ ವರ್ಷದ ನಡುವಿನ ಅವಧಿಯಲ್ಲಿ ತನ್ನ ಡಬಲ್ಸ್‌‌ ಮತ್ತು ಮಿಶ್ರ ಡಬಲ್ಸ್‌‌ ಆಟಗಳ ಮೇಲೆ ಪೇಸ್‌ ಅತೀವವಾಗಿ ಗಮನಹರಿಸಿದ್ದಾನೆ. ೨೦೦೩ರಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ ಮತ್ತು ವಿಂಬಲ್ಡನ್‌ ಪಂದ್ಯಾವಳಿಗಳಲ್ಲಿ ಮಾರ್ಟಿನಾ ನವ್ರಾಟಿಲೋವಾ ಜೊತೆಯಾಟದಲ್ಲಿ ಲಿಯಾಂಡರ್‌ ಮಿಶ್ರ ಡಬಲ್ಸ್‌‌ ಸ್ಪರ್ಧೆಗಳನ್ನು ಗೆದ್ದುಕೊಂಡ. ವಿಂಬಲ್ಡನ್‌ನಲ್ಲಿ ಗೆಲುವು ಕಂಡ ಕೆಲ ವಾರಗಳ ನಂತರ, ಪೇಸ್‌ ಓರ್ಲೆಂಡೊನಲ್ಲಿನ .. ಆಂಡರ್‌ಸನ್‌ ಕ್ಯಾನ್ಸರ್‌ ಸೆಂಟರ್‌‌ಗೆ ದಾಖಲಿಸಲ್ಪಟ್ಟ; ಅವನ ಮಿದುಳಿನಲ್ಲಿ ಗಡ್ಡೆಯಿರಬಹುದೆಂಬ ಶಂಕೆಯೊಂದಿಗೆ ಅವನನ್ನು ಅಲ್ಲಿಗೆ ಸೇರಿಸಲಾಗಿತ್ತು. ಆತ ನ್ಯೂರೋಸಿಸ್ಟಿಸೆರ್ಕೋಸಿಸ್‌ ಎಂದು ಕರೆಯಲ್ಪಡುವ ಪರೋಪಜೀವಿಯ ಮಿದುಳು ಸೋಂಕಿಗೆ ಈಡಾಗಿದ್ದ ಎಂದು ನಂತರದಲ್ಲಿ ತಿಳಿದುಬಂತು. ಇದಕ್ಕೆ ಸಂಬಂಧಿಸಿದಂತೆ ಉಪಚರಿಸಲ್ಪಡುತ್ತಿರುವಾಗ ಆತ ಓಪನ್‌ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಬೇಕಾಗಿ ಬಂತು; ಆದರೆ ಆ ವರ್ಷಾಂತ್ಯದೊಳಗೆ ಅವನು ಚೇತರಿಸಿಕೊಂಡ. ೨೦೦೪ರ ಅಥೆನ್ಸ್‌ ಒಲಿಂಪಿಕ್‌ ಆಟಗಳಲ್ಲಿ ಆತ ಮಹೇಶ್ ಭೂಪತಿಯ ಜೊತೆಗೂಡಿ ಆಟವಾಡಿದನಾದರೂ, ಉಪಾಂತ್ಯ ಪಂದ್ಯಗಳ ಹಂತದಲ್ಲಿ ಮತ್ತೊಮ್ಮೆ ಸೋಲೊಪ್ಪಿಕೊಳ್ಳಬೇಕಾಗಿ ಬಂತು. ೨೦೦೬ರಲ್ಲಿ ನಡೆದ .. ಓಪನ್‌ ಡಬಲ್ಸ್‌‌ ಸ್ಪರ್ಧೆಯಲ್ಲಿ ಮಾರ್ಟಿನ್‌ ಡ್ಯಾಮ್ ಜೊತೆಗೂಡಿ ಆಡಿದ ಆತ ಗ್ರಾಂಡ್‌ ಸ್ಲಾಂ ಯಶಸ್ಸನ್ನು ದಾಖಲಿಸಿದ. ೨೦೦೬ರಲ್ಲಿ ನಡೆದ ದೋಹಾ ಏಷ್ಯನ್‌ ಕ್ರೀಡೆಗಳಲ್ಲಿ ಭಾರತೀಯ ಟೆನಿಸ್‌ ತಂಡದ ನೇತೃತ್ವವನ್ನು ಪೇಸ್‌ ವಹಿಸಿದ ಹಾಗೂ ಪುರುಷರ ಡಬಲ್ಸ್‌‌ (ಮಹೇಶ್ ಭೂಪತಿ ಜೊತೆಯಾಟದಲ್ಲಿ) ಮತ್ತು ಮಿಶ್ರ ಡಬಲ್ಸ್‌‌ (ಸಾನಿಯಾ ಮಿರ್ಜಾ ಜೊತೆಯಾಟದಲ್ಲಿ) ವರ್ಗಗಳಲ್ಲಿ ಎರಡು ಬಂಗಾರದ ಪದಕಗಳನ್ನು ಗೆದ್ದುಕೊಂಡ. ೨೦೦೫ ಮತ್ತು ೨೦೦೭ರ ನಡುವೆ, ವಿಶ್ವದಲ್ಲಿನ ಅಗ್ರಗಣ್ಯ ೨೦ ಆಟಗಾರರ ಪಟ್ಟಿಯಲ್ಲಿ ತನ್ನ ಡಬಲ್ಸ್‌‌ ಶ್ರೇಯಾಂಕವನ್ನು ಪೇಸ್‌ ಕಾಯ್ದುಕೊಂಡಿದ್ದಾನೆ. ೨೦೦೭ರ ಮೇ ತಿಂಗಳ ವೇಳೆಗೆ ಇದ್ದಂತೆ, ಇಂಡಿಯನ್‌ ವೆಲ್ಸ್‌‌ನಲ್ಲಿನ ಮಾಸ್ಟರ್ಸ್‌ ಸರಣಿ ಮತ್ತು ರೋಟರ್‌ಡ್ಯಾಮ್‌ನಲ್ಲಿನ ವಿಜಯಗಳಿಂದಾಗಿ ಪೇಸ್‌ ತನ್ನ ಡಬಲ್ಸ್‌ ಗೆಲುವಿನಂಕಗಳ ಮೊತ್ತವನ್ನು ೩೮ಕ್ಕೆ ಮುಟ್ಟಿಸಿದ್ದಾನೆ. ೨೦೦೮ರ ಬೀಜಿಂಗ್‌ ಒಲಿಂಪಿಕ್ಸ್‌‌‌ನಲ್ಲಿನ ಪುರುಷರ ಡಬಲ್ಸ್‌ ವರ್ಗದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್ ಭೂಪತಿ ಭಾಗವಹಿಸಿದರು. ಆದರೆ ರೋಜರ್‌‌ ಫೆಡರರ್‌ ಮತ್ತು ಸ್ಟಾನಿಸ್ಲಾಸ್‌ ವಾವ್ರಿಂಕಾ ಜೋಡಿಯು ಪೇಸ್‌-ಭೂಪತಿ ಜೋಡಿಯನ್ನು ಕ್ವಾರ್ಟರ್‌-ಫೈನಲ್‌ ಪಂದ್ಯಗಳ ಹಂತದಲ್ಲಿಯೇ ಸೋಲಿಸಿ ಹೊರಹಾಕಿತು ಮತ್ತು ಪುರುಷರ ಡಬಲ್ಸ್‌‌ ಬಂಗಾರ ಪದಕವನ್ನು ಗೆಲ್ಲುವಲ್ಲಿ ಯಶಸ್ಸು ಕಂಡಿತು. ನಂತರ ೨೦೦೮ರಲ್ಲಿ, ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ಅವನು ೨೦೦೮ರ ಓಪನ್‌ ಮಿಶ್ರ ಡಬಲ್ಸ್‌‌ ಪಟ್ಟವನ್ನು ಗೆದ್ದುಕೊಂಡ. ೨೦೦೯ರಲ್ಲಿ, ಲ್ಯೂಕಾಸ್‌ ಡ್ಲೌಹಿ ಜೊತೆಯಾಟದಲ್ಲಿ ಅವನು ಫ್ರೆಂಚ್‌ ಓಪನ್‌ ಮತ್ತು ಓಪನ್‌ ಪುರುಷರ ಡಬಲ್ಸ್‌‌ ಪಟ್ಟಗಳನ್ನು ಗೆದ್ದುಕೊಂಡ; ಅಷ್ಟೇ ಅಲ್ಲ, ಓಪನ್‌ ಪಂದ್ಯಾವಳಿಯ ಮಿಶ್ರ ಡಬಲ್ಸ್‌‌ನ ಅಂತಿಮ ಪಂದ್ಯದಲ್ಲಿ ಅವನು ಉಪಾಂತ-ವಿಜಯಿಯಾಗಿ ಹೊರಹೊಮ್ಮಿದ. ೨೦೧೦ ಆಸ್ಟ್ರೇಲಿಯನ್‌ ಓಪನ್‌ – ಮಿಶ್ರ ಡಬಲ್ಸ್‌‌ ಪಟ್ಟವನ್ನು ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ಗೆಲ್ಲುವ ಮೂಲಕ, ಆತ ೨೦೧೦ರ ಋತುವನ್ನು ಉತ್ತಮ ಫಾರಂನಲ್ಲಿ ಶುರುಮಾಡಿದ. ಇದು ಸದರಿ ಜೋಡಿಯ ೩ನೇ ಅನುಕ್ರಮಿಕ ಗ್ರಾಂಡ್‌ ಸ್ಲಾಂ ಅಂತಿಮ ಪಂದ್ಯವಾಗಿತ್ತು ಮತ್ತು ಒಟ್ಟಾರೆಯಾಗಿ ೪ನೇ ಪಂದ್ಯವಾಗಿತ್ತು. ಕ್ಯಾರಾ ಬ್ಲಾಕ್‌ ಜೊತೆಯಾಟದಲ್ಲಿ ೨೦೧೦ರ ವಿಂಬಲ್ಡನ್‌ನಲ್ಲಿ ಗೆಲುವು ಸಾಧಿಸಿರುವುದರಿಂದಾಗಿ ಪೇಸ್‌ ಭಾರತದ ಅಗ್ರಗಣ್ಯ ಗ್ರಾಂಡ್‌ ಸ್ಲಾಂ ವಿಜಯಿ ಎನಿಸಿಕೊಂಡಿದ್ದಾನೆ. ೨೦೧೨ರ ವರ್ಷದಲ್ಲಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಸ್ತೆಪಾನಿಕ್ ಜೊತೆಗೂಡಿ ಗೆದ್ದಿದ್ದಾನೆ ಮತ್ತು ತನ್ಮೂಲಕ ಒಟ್ಟು ೧೨ ಗ್ರಾಂಡ್‌ ಸ್ಲಾಂ ಪಟ್ಟಗಳನ್ನು ಹೊಂದಿರುವ ತನ್ನ ಮಾಜಿ-ಡಬಲ್ಸ್‌‌ ಜೊತೆಯಾಟಗಾರ ಮಹೇಶ್ ಭೂಪತಿಗಿಂತ ಮುಂದಿದ್ದಾನೆ. === ಡೇವಿಸ್‌ ಕಪ್‌ ವೃತ್ತಿಜೀವನ === ಕೇವಲ ೧೬ನೇ ವರ್ಷದಷ್ಟು ಚಿಕ್ಕ ವಯಸ್ಸಿನಲ್ಲಿಯೇ ಲಿಯಾಂಡರ್‌ ಪೇಸ್‌ ತನ್ನ ಡೇವಿಸ್‌ ಕಪ್‌ ವೃತ್ತಿಜೀವನವನ್ನು ೧೯೯೦ರಲ್ಲಿ ಆರಂಭಿಸಿದ. ಈ ಅವಧಿಯಲ್ಲಿ ಡಬಲ್ಸ್‌‌ ವರ್ಗದಲ್ಲಿ ಜೀಶನ್‌ ಆಲಿಯೊಂದಿಗೆ ಜೊತೆಯಾಟವನ್ನು ಪ್ರಾರಂಭಿಸಿದ ಪೇಸ್‌, ಒಂದು ತ್ರಾಸದಾಯಕವಾದ ೫ ಸೆಟ್ಟುಗಳ ಮುಖಾಮುಖಿಯಲ್ಲಿ ಜಪಾನಿಯರ ತಂಡವನ್ನು ಸೋಲಿಸಿದ. ೨೦೦೭ರ ಮೇ ತಿಂಗಳ ವೇಳೆಗೆ ಇದ್ದಂತೆ, ಒಟ್ಟಾರೆಯಾಗಿ ಆತ ೮೧–೩೦ರಷ್ಟು ಪ್ರಮಾಣದಲ್ಲಿನ ಒಂದು ದಾಖಲೆಯನ್ನು ಹೊಂದಿದ್ದು, ತನ್ನ ದೇಶಕ್ಕೆ ಸಂಬಂಧಿಸಿದಂತಿರುವ ಅಗ್ರಗಣ್ಯ ಡೇವಿಸ್‌ ಕಪ್‌ ಆಟಗಾರರ ಪೈಕಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ೧೯೯೧–೧೯೯೮ರ ಅವಧಿಯಲ್ಲಿ ವಿಶ್ವ ಗುಂಪನ್ನು ತಲುಪಿದ ಭಾರತೀಯ ಡೇವಿಸ್‌ ಕಪ್‌ ತಂಡದಲ್ಲಿ ಅವನು ಒಂದು ಪ್ರಮುಖ ಪಾತ್ರವನ್ನು ವಹಿಸಿದ. ೧೯೯೩ರ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಸ್ವಿಜರ್‌ಲೆಂಡ್‌ ಮತ್ತು ಫ್ರಾನ್ಸ್ ತಂಡಗಳ ವಿರುದ್ಧ ವಿಜಯಗಳನ್ನು ದಾಖಲಿಸುವುದರೊಂದಿಗೆ ಉಪಾಂತ್ಯದ ಹಂತವನ್ನು ತಲುಪಿದ ಭಾರತೀಯ ಡೇವಿಸ್‌ ಕಪ್‌ ತಂಡದಲ್ಲಿ ಅವನು ಒಂದು ಭಾಗವಾಗಿದ್ದ; ಆದರೆ ಭಾರತ ತಂಡವು ಅಂತಿಮವಾಗಿ ಆಸ್ಟ್ರೇಲಿಯಾ ತಂಡಕ್ಕೆ ಸೋಲಬೇಕಾಯಿತು. ಸಿಂಗಲ್ಸ್‌ ವಿಭಾಗದಲ್ಲಿ ಅವನು ದಾಖಲಿಸಿದ ಪ್ರಮುಖ ವಿಜಯಗಳಲ್ಲಿ ಇವು ಸೇರಿವೆ: ಫ್ರೆಂಚ್‌ ದ್ವಯರಾದ ಆರ್ನೌಡ್‌ ಬೋಷ್‌ ಮತ್ತು ಹೆನ್ರಿ ಲೆಕೊಂಟೆ ವಿರುದ್ಧ ೧೯೯೩ರಲ್ಲಿ ಫ್ರೆಜಸ್‌ ಫ್ರಾನ್ಸ್‌ನಲ್ಲಿನ ವಿಜಯ, ೧೯೯೪ರಲ್ಲಿ ವೇಯ್ನ್‌ ಫೆರೀರಾ ವಿರುದ್ಧದ ವಿಜಯ, ೧೯೯೫ರಲ್ಲಿ ಭಾರತವು ಕ್ರೊವೇಷಿಯಾವನ್ನು ಸೋಲಿಸಿದಾಗ ಗೋರನ್‌ ಇವಾನಿಸೆವಿಕ್‌ ವಿರುದ್ಧದ ವಿಜಯ, ೧೯೯೫ರಲ್ಲಿ ನೆದರ್ಲೆಂಡ್ಸ್‌‌ನ್ನು ಸೋಲಿಸಿದಾಗ ಜಾನ್‌ ಸೀಮರಿಂಕ್‌ ವಿರುದ್ಧ ದಾಖಲಾದ ವಿಜಯ, ೧೯೯೭ರಲ್ಲಿ ಜಿರೀ ನೊವಾಕ್‌ ವಿರುದ್ಧದ ವಿಜಯ.. ಮಹೇಶ್ ಭೂಪತಿಯೊಂದಿಗೆ ಜೊತೆಗೂಡಿದ ಅವನು ೧೯೯೫ರಲ್ಲಿ ಕ್ರೊವೇಷಿಯಾದ ಹಿರ್ಸ್‌ಜೋನ್‌ ಮತ್ತು ಇವಾನಿಸೆವಿಕ್‌ ಜೋಡಿಯನ್ನೂ, ೧೯೯೭ರಲ್ಲಿ ಝೆಕ್‌ ಗಣರಾಜ್ಯದ ಮಾರ್ಟಿನ್‌ ಡ್ಯಾಮ್‌ ಮತ್ತು ಪೆಟ್ರ್‌‌ ಕೋರ್ಡಾ ಜೋಡಿಯನ್ನೂ, ೧೯೯೭ರಲ್ಲಿ ಚಿಲಿ ದೇಶದ ನಿಕೋಲಸ್‌ ಮಾಸ್ಸು ಮತ್ತು ಮಾರ್ಸೆಲೊ ರಯೋಸ್‌ ಜೋಡಿಯನ್ನೂ, ೧೯೯೮ರಲ್ಲಿ ಬ್ರಾಡ್‌ ಮತ್ತು ಟಿಮ್‌ ಹೆನ್‌ಮನ್‌‌ ಜೋಡಿಯನ್ನೂ ಹಾಗೂ ೨೦೦೫ರಲ್ಲಿ ಸ್ವೀಡನ್‌ನ ಸೈಮನ್‌ ಆಸ್ಪೆಲಿನ್‌ ಮತ್ತು ಜೋನಾಸ್‌ ಜೋರ್ಕ್‌ಮನ್‌ ಜೋಡಿಯನ್ನೂ ಸೋಲಿಸಿದ. ೨೦೦೭ರಲ್ಲಿನ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಲಿಯಾಂಡರ್‌ ೩ ವಿಜಯಗಳನ್ನು (೨ ಡಬಲ್ಸ್‌‌ ೧ ಸಿಂಗಲ್ಸ್‌) ತನ್ನ ಖಾತೆಗೆ ಸೇರಿಸಿಕೊಂಡಿದ್ದಾನೆ ಮತ್ತು ಇದರಲ್ಲಿ ಅವನು ಸೋಲನ್ನು ಕಂಡಿಲ್ಲ‌. == ವೃತ್ತಿಜೀವನದ ಪ್ರಮುಖ ವಿಜಯಗಳು == === ಸಿಂಗಲ್ಸ್‌ ಪಟ್ಟಗಳು === === ಪುರುಷರ ಡಬಲ್ಸ್‌‌ ಪಟ್ಟಗಳು (44) === == ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯಗಳು == === ಪುರುಷರ ಡಬಲ್ಸ್‌‌: 12 ಅಂತಿಮ ಪಂದ್ಯಗಳು (6 ಪಟ್ಟಗಳು, 6 ಉಪಾಂತ-ವಿಜಯಿಗಳು) === === ಮಿಶ್ರ ಡಬಲ್ಸ್‌‌: 11 ಅಂತಿಮ ಪಂದ್ಯಗಳು (6 ಪಟ್ಟಗಳು, 5 ಉಪಾಂತ-ವಿಜಯಿಗಳು) === == ಡಬಲ್ಸ್‌‌ ಪ್ರದರ್ಶನದ ಕಾಲಯೋಜನೆ == = ಪಂದ್ಯಾವಳಿಯಲ್ಲಿ ಭಾಗವಹಿಸಲಿಲ್ಲ == ಮಹೇಶ್ ಭೂಪತಿಯೊಂದಿಗಿನ ಸಂಬಂಧ == ಟೆನಿಸ್‌ ಅಂಕಣದಲ್ಲಿ ಮತ್ತು ಅದರಾಚೆಗೆ ತನ್ನ ಸಹವರ್ತಿ ಭಾರತೀಯ ಟೆನಿಸ್‌ ಆಟಗಾರನಾದ ಮಹೇಶ್ ಭೂಪತಿಯೊಂದಿಗೆ ಲಿಯಾಂಡರ್‌ ಪೇಸ್ ಹೊಂದಿರುವ ಜೊತೆಗಾರಿಕೆಯು ಅವನ ತಾಯ್ನಾಡಾದ ಭಾರತದಲ್ಲಿನ ಮಾಧ್ಯಮಗಳ ಗಮನವನ್ನು ಏಕಪ್ರಕಾರವಾಗಿ ಸೆಳೆದಿದೆ. ೨೦೦೬ರ ಏಷ್ಯನ್‌ ಕ್ರೀಡೆಗಳಲ್ಲಿ‌, ತಂಡ ಸ್ಪರ್ಧೆಯಲ್ಲಿ ಚೀನಾದ ತೈಪೀಗೆ ಸೋಲಬೇಕಾಗಿ ಬಂದಾಗ, ಭಾರತ ತಂಡದೆಡೆಗೆ ಭೂಪತಿಯು ಹೊಂದಿರುವ ಬದ್ಧತೆಯ ಕುರಿತಾಗಿ ಲಿಯಾಂಡರ್‌ ಪ್ರಶ್ನಿಸಬೇಕಾಗಿ ಬಂತು. ಅವನು ಸಂದರ್ಶನವೊಂದರಲ್ಲಿ ಒಮ್ಮೆ ಮಾತನಾಡುತ್ತಾ, ತಾನು ಮತ್ತು ಭೂಪತಿ ಸ್ನೇಹಿತರಾಗಿದ್ದರೂ ಸಹ, ತನ್ನ ತಂಡದ ಹಿಂದಿನ-ಸಹವರ್ತಿಯೊಂದಿಗೆ ಜೊತೆಗೂಡುವುದನ್ನು ತಾನು ಪರಿಗಣಿಸಲಿಲ್ಲ ಎಂದು ತಿಳಿಸಿದ. ಆದಾಗ್ಯೂ, ೨೦೦೮ರ ಬೀಜಿಂಗ್‌ ಒಲಿಂಪಿಕ್ಸ್‌‌ಗೆ ಸಂಬಂಧಿಸಿದಂತೆ ತಮ್ಮ ದೇಶದ ಪರವಾಗಿ ಒಟ್ಟಾಗಿ ಆಡಲು ಅವರು ನಿರ್ಧರಿಸಿದರು ಮತ್ತು ಸಂಭಾವ್ಯ ಚಾಂಪಿಯನ್ನರಾದ ರೋಜರ್‌‌ ಫೆಡರರ್‌ ಮತ್ತು ಸ್ಟಾನಿಸ್ಲಾಸ್‌ ವಾವ್ರಿಂಕಾ ಜೋಡಿಗೆ ಎದುರಾಗಿ ಕ್ವಾರ್ಟರ್‌-ಫೈನಲ್‌ ಪಂದ್ಯಗಳಲ್ಲಿ ಅವರು ಸೋತರು. ೨೦೧೦ರಲ್ಲಿ, ಥೈಲೆಂಡ್‌ ಓಪನ್‌ (ಒಂದು ೨೫೦ ಪಂದ್ಯಾವಳಿ) ಪಂದ್ಯಾವಳಿಯಲ್ಲಿ ಡಬಲ್ಸ್‌‌ ಜೊತೆಯಾಟಗಾರರಾಗಿ ಅವರು ಮತ್ತೆ ಜೊತೆಯಾದರಾದರೂ, ಅಂತಿಮವಾಗಿ ಮೊದಲ ಸುತ್ತಿನಲ್ಲಿಯೇ ಸೋತು ಸ್ಪರ್ಧೆಯಿಂದ ಹೊರಹಾಕಲ್ಪಟ್ಟರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಲಿಯಾಂಡರ್‌ ಪೇಸ್‌ ಅಭಿಮಾನಿಗಳ ಜಾಲತಾಣ 2014-08-14 ವೇಬ್ಯಾಕ್ ಮೆಷಿನ್ ನಲ್ಲಿ. ಬಯೋ * ಫೈಲ್‌ ಇಂಟರ್‌ವ್ಯೂ ವಿತ್‌‌ ಲಿಯಾಂಡರ್‌ ಪೇಸ್‌ ಲಿಯಾಂಡರ್‌ ಪೇಸ್‌ ಟೆಂಪ್ಲೇಟು: ಟೆಂಪ್ಲೇಟು:- ಟೆಂಪ್ಲೇಟು:-